ಅಭಿಪ್ರಾಯ / ಸಲಹೆಗಳು

ಜಾಬ್ ಚಾರ್ಟ್

ಮುಖ್ಯ ಸಂಪಾದಕರು

1) ಮುಖ್ಯ ಸಂಪಾದಕರು: ಸರಕಾರದ ಇಲಾಖೆಯ ಮುಖ್ಯಸ್ಥರ ಸ್ಥಾನಮಾನ ಹೊಂದಿರುವ ಮುಖ್ಯಸಂಪಾದಕರ ಹುದ್ದೆ ಬಹು ಜವಾಬ್ದಾರಿಯುತ ಹುದ್ದೆಯಾಗಿದ್ದು, ವಾರ್ತಾ ಇಲಾಖೆಯ ನಿರ್ದೇಶಕರ ಹುದ್ದೆಗೆ ಸಮನಾಗಿರುತ್ತದೆ. ಇವರು ಇಲಾಖೆಯು ಪ್ರಕಟಿಸುವ ಎಲ್ಲಾ ಸಂಫುಟಗಳ ಸಂಪಾದನೆ, ಪ್ರಕಟಣೆ ಹಾಗೂ ಆಡಳಿತಾತ್ಮಕ ಕರ್ತವ್ಯ, ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.

2) ಇವರು ಜಿಲ್ಲಾ ಹಾಗೂ ರಾಜ್ಯ ಗ್ಯಾಸೆಟಿಯರ್ ಗಳ ಪ್ರಕಟಣಾ ಕಾರ್ಯದ ವಿವಿಧ ಹಂತಗಳನ್ನು ಯೋಜಿಸಿ, ರೂಪಿಸಿ ಅವುಗಳ ಆರ್ಥಿಕ ಹಾಗೂ ಭೌತಿಕ ಗುರಿ ಸಾಧನೆಯಲ್ಲಿ ಯಾವುದೇ ಗುಣಾತ್ಮಕತೆಗೆ ಧಕ್ಕೆಬಾರದಂತೆ ಪ್ರಗತಿ ಪರಿಶೀಲನೆ ನಡೆಸುವರು. ಇವರ ನಿರ್ವಹಣೆಯಲ್ಲಿ ಆದ್ಯತೆಯ ಮೇರೆಗೆ ಇಡೀ ವರ್ಷ ಪ್ರಕಟಣಾ ಕಾರ್ಯ ನಿರಂತರವಾಗಿ ಸಾಗುವಂತೆ ಕಾರ್ಯಕ್ರಮ ರೂಪಿಸಬೇಕು. ಜಿಲ್ಲಾ ಗ್ಯಾಸೆಟಿಯರ್ ಗಳ ಸ್ವರೂಪ, ವಿಷಯಾನುಕ್ರಮಣೆ ಮುಂತಾದವುಗಳನ್ನು ರಾಷ್ಟ್ರೀಯಮಟ್ಟದಲ್ಲಿ ನಿಗದಿಯಾಗಿರುವಂತೆ ಯೋಜಿಸಿ, ಅವಶ್ಯಕತೆ ಇದ್ದಲ್ಲಿ ಸ್ಥಳೀಯ ವಿಶೇಷಗಳಿಗನುಗುಣವಾಗಿ ಬದಲಾವಣೆ ಮಾಡಿ, ಗ್ಯಾಸೆಟಿಯರ್ ಗಳನ್ನು ಅಧಿಕೃತಗೊಳಿಸಲು ಶ್ರಮಿಸಬೇಕಾದುದು ಇವರ ಪ್ರಮುಖ ಕರ್ತವ್ಯವಾಗಿರುತ್ತದೆ.

3) ಕಛೇರಿಯ ಹಿರಿಯ ಸಂಪಾದಕರು, ಇತರೆ ಸಂಪಾದಕರ, ಅನ್ವೇಷಕರ ಹಾಗೂ ಅಧೀಕ್ಷಕರ ಕಾರ್ಯಗಳಲ್ಲಿ ಅವರಿಗೆ ಅವರವರ ಹುದ್ದೆಗಳಿಗೆ ತಕ್ಕಂತಹ ಕೆಲಸ ಕಾರ್ಯಗಳನ್ನು ವಹಿಸಿ, ನಿರ್ದೇಶನವನ್ನು ಮತ್ತು ಮಾರ್ಗದರ್ಶನವನ್ನು ನೀಡಿ, ಅವರ ಕಾರ್ಯಪ್ರಗತಿಯ ಸಮರ್ಪಕತೆಯನ್ನು ಕಾಲಕಾಲಕ್ಕೆ ಪರಿಶೀಲಿಸಬೇಕಲ್ಲದೆ, ಇಲಾಖೆಯ ವಿವಿಧ ವಿಭಾಗಗಳ ಕಾರ್ಯಪ್ರಗತಿಯ ಬಗ್ಗೆಯೂ ನಿಗಾ ವಹಿಸಬೇಕು. ಸಂಪಾದಕರ ವರ್ಗದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಅವರು ಸಹಕಾರ ನೀಡಬೇಕು.

4) ವಿವಿಧ ಆಕರಗಳಿಂದ ಮಾಹಿತಿ ಸಂಗ್ರಹ ಮಾಡಿ, ಅದನ್ನು ಗ್ಯಾಸೆಟಿಯರ್ ಗಳ ಗುಣಾತ್ಮಕತೆಯನ್ನು ವೃದ್ಧಿಸಲು ಸದುಪಯೋಗಪಡಿಸಿಕೊಳ್ಳಬೇಕು. ಎಲ್ಲಾ ಜಿಲ್ಲೆಗಳ ರಚನೆ, ಭೌಗೋಳಿಕತೆ ಹಾಗೂ ಹವಾಗುಣ ಮುಂತಾದವು ಏಕರೂಪದಲ್ಲಿರುವುದಿಲ್ಲವಾದ್ದರಿಂದ, ಆಯಾಯ ಜಿಲ್ಲೆಗಳ ಸಂದರ್ಭಾನುಸಾರ ಮುಖ್ಯ ಸಂಪಾದಕರು ಕಾರ್ಯಕ್ರಮಗಳನ್ನು ಯೋಜಿಸಬೇಕು. ವಿವಿಧ ಸರಕಾರ, ಅರೆ ಸರಕಾರಿ, ಖಾಸಗಿ ಸಂಸ್ಥೆಗಳು, ಸಂಘಗಳಿಗೆ, ತಜ್ಞರಿಗೆ, ಖಾಸಗಿ ವ್ಯಕ್ತಿಗಳಿಗೆ ಪತ್ರಗಳನ್ನು ಬರೆಸಿ, ಮಾಹಿತಿ ಸಂಗ್ರಹಿಸಬೇಕು. ಸಕಾಲಕ್ಕೆ ಉತ್ತರಗಳು ಬಾರದಿದ್ದಲ್ಲಿ ನೆನಪೋಲೆಗಳನ್ನು ಬರೆಯಿಸಿ, ಇಲಾಖೆಗೆ ಅವಶ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು. ಹಲವೊಮ್ಮೆ ಇದಕ್ಕಾಗಿ ಮನವೊಲಿಸುವ, ವಿನಂತಿಸುವ ಮಾರ್ಗೋಪಾಯಗಳನ್ನು ಉಪಯೋಗಿಸಬೇಕು.

5) ಸಂಬಂಧಪಟ್ಟ ಜಿಲ್ಲೆಯಾದ್ಯಂತೆ ಮುಖ್ಯ ಸಂಪಾದಕರು, ಕನಿಷ್ಠ ಒಂದು ತಿಂಗಳ ಕಾಲ ಪ್ರವಾಸ ಕೈಗೊಂಡು, ಜಿಲ್ಲೆಯ ಅಮೂಲಾಗ್ರ ಪರಿಚಯ ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಕಛೇರಿಗಳಿಗೆ, ಸಂಘ ಸಂಸ್ಥೆಗಳಿಗೆ, ಪುರಾತನ ಅವಶೇಷಗಳಿಗೆ, ಪ್ರಮುಖ ಗ್ರಂಥಾಲಯಗಳಿಗೆ, ವಸ್ತು ಸಂಗ್ರಹಾಲಯಗಳೀಗೆ, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ, ಗ್ಯಾಸೆಟಿಯರ್ ನ ವಿವಿಧ ಅಧ್ಯಾಯಗಳಿಗೆ ಅವಶ್ಯವೆನಿಸುವ ಮಾಹಿತಿ ಇದ್ದಲ್ಲಿ ಅದನ್ನು ಪಟ್ಟಿ ಮಾಡಿ, ಸಂಗ್ರಹಿಸಿ, ಛಾಯಾಚಿತ್ರಗಳು ಲಭ್ಯವಿದ್ದಲ್ಲಿ ಪಡೆದು, ವಿವಿಧ ಸಂಪಾದಕರಿಗೆ ನೀಡಬೇಕು. ಈ ಸಂದರ್ಭದಲ್ಲಿ ಜಿಲ್ಲೆಯ ಗಣ್ಯವ್ಯಕ್ತಿಗಳನ್ನು, ತಜ್ಞರನ್ನು, ಅಧಿಕಾರಿಗಳನ್ನು ಭೇಟಿ ಮಾಡಿ, ಸಂಭಾಷಣೆ ಅಥವಾ ಚರ್ಚೆಯ ಮೂಲಕ ಮಾಹಿತಿಯನ್ನು ಸಂಗ್ರಹಿಸಬೇಕು.

6) ರಾಜ್ಯದ ವಿವಿಧೆಡೆ ಅಥವಾ ದೇಶದ ಇತರೆ ಸ್ಥಳಗಳಲ್ಲಿ ಆಯೋಜಿಸಲ್ಪಡುವ ಪ್ರಮುಖ ವಿಚಾರ ಸಂಕಿರಣ, ಕಮ್ಮಟ, ಅಧಿವೇಶನ, ಗೋಷ್ಠಿ, ಚರ್ಚಾಕೂಟ ಹಾಗೂ ಸಮ್ಮೇಳನಗಳಲ್ಲಿ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸುವ ಮೂಲಕ ಸಕ್ರಿಯವಾಗಿ ಭಾಗವಹಿಸಬೇಕು. ಸಂಬಂಧಪಟ್ಟ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಇಲಾಖೆಗಳು ಸಂಘ-ಸಂಸ್ಥೆಗಳೊಡನೆ ಪತ್ರ ಮುಖೇನ ಅಥವಾ ವೈಯಕ್ತಿಕ ಸಂಪರ್ಕ ಹೊಂದಿರಬೇಕು.

7) ಹಲವಾರು ಸರಕಾರಿ ಹಾಗೂ ಖಾಸಗಿ ಇಲಾಖೆಗಳು, ಸಂಘ ಸಂಸ್ಥೆಗಳು, ವಿದ್ವಾಂಸರು, ತಜ್ಞರು ಮತ್ತು ವ್ಯಕ್ತಿಗಳು ನಡೆಸುವ ಅಧ್ಯಯನ ಹಾಗೂ ಕಾಲಕಾಲಕ್ಕೆ ಹೊರತರುವ ಪ್ರಕಟಣೆಗಳ ಮಾಹಿತಿ ಹೊಂದಿರಬೇಕು.

8) ರಾಜ್ಯದ ಇತರ ಜಿಲ್ಲೆಗಳ ಬಗ್ಗೆ ವಿವಿಧ ಸ್ಥಳಗಳಿಂದ ಮಾಹಿತಿ ಸಂಗ್ರಹಿಸಿಡಬೇಕು. ಇದರಿಂದ ಇಲಾಖೆಯ ಮುಂದಿನ ಪ್ರಕಟಣಾ ಕಾರ್ಯ ಸುಲಲಿತಗೊಳ್ಳುವುದು.

9) ಇಲಾಖೆಯ ಸಂಪಾದಕ ಹಾಗೂ ಅನ್ವೇಷಕರಿಗೆ ಮಾಹಿತಿ ದೊರೆಯುವ ತಾಣ, ವ್ಯಕ್ತಿ, ಸಂಸ್ಥೆ, ಗ್ರಂಥಾಲಯ ಮುಂತಾದವುಗಳ ಬಗ್ಗೆ ಮಾರ್ಗದರ್ಶನ ನೀಡಬೇಕು.

10) ಈ ರೀತಿ ಕಲೆ ಹಾಕಿದ ಎಲ್ಲಾ ಮಾಹಿತಿಯನ್ನು ಕ್ರೋಢೀಕರಿಸಿ, ಪರಾಮರ್ಶಿಸಿ ಗ್ಯಾಸೆಟಿಯರುಗಳ ಪ್ರಕಟಣೆಯಲ್ಲಿ ಸೂಕ್ತವಾಗಿ ಅವಶ್ಯವಿದ್ದೆಡೆ ಉಪಯೋಗಿಸಿಕೊಂಡು, ಗ್ರಂಥಗಳನ್ನು ಮೌಲಿಕವಾಗಿಸಲು ಶ್ರಮಿಸಬೇಕು. ಇದಕ್ಕಾಗಿ ಇಲಾಖಾ ಸಂಪಾದಕ/ಸಿಬ್ಬಂದಿಗೆ ಅಧ್ಯಾಯ ರಚನೆಯಲ್ಲಿ ಮಾರ್ಗದರ್ಶನ ನೀಡಬೇಕು.   

11) ಜಿಲ್ಲಾ\ರಾಜ್ಯ ಗ್ಯಾಸೆಟಿಯರಿನ ಎಲ್ಲಾ ಅಧ್ಯಾಯಗಳ ರಚನೆಯಲ್ಲಿ ಮುಖ್ಯ ಸಂಪಾದಕರ ಪಾತ್ರ ಪ್ರಮುಖವಾಗಿರುತ್ತದೆ. ಎಲ್ಲಾ ಅಧ್ಯಾಯಗಳ ಸಂಪಾದನೆ, ಅಪೆಂಡಿಕ್ಸ್, ಅಡೆಂಡಾ, ಕೋರಿಜೆಂಡಾ, ಇಂಡೆಕ್ಸ್ ಮುಂತಾದವುಗಳನ್ನು ಪರಿಶೀಲಿಸಿ, ಅವಶ್ಯವಿದ್ದೆಡೆ ಬದಲಾಯಿಸಿ, ಹೊಸ ವಿಷಯಗಳ ಸೇರ್ಪಡೆ ಮಾಡಿ, ಅನಾವಶ್ಯಕಗಳನ್ನು ತೆಗೆದುಹಾಕಿ, ಪುನರ್ ಪರಿಶೀಲನೆ ನಡೆಸುವುದರ ಮೂಲಕ ಅವುಗಳ ನಿಖರತೆ ಹಾಗೂ ಅಧಿಕೃತತೆಗಳ ಬಗ್ಗೆ ಸ್ವಯಂ ತೃಪ್ತಿಹೊಂದಿದ ನಂತರ ಅವುಗಳನ್ನು ಅಚ್ಚಿಗಾಗಿ ರವಾನಿಸಬೇಕು. ಅಂಕಿ-ಅಂಶಗಳ ವಿಷಯದಲ್ಲಿ ಅತಿ ಹೆಚ್ಚಿನ ಜಾಗರೂಕತೆ ವಹಿಸಿ ಅನುಮಾನ ಬಂದೆಡೆ ದೂರವಾಣಿ ಅಥವಾ ಸಿಬ್ಬಂದಿಯನ್ನು ಕಳುಹಿಸುವ ಮೂಲಕ ಪರಿಹರಿಸಿಕೊಂಡು, ಎಲ್ಲಾ ಅಧ್ಯಾಯಗಳೂ ವ್ಯಾಕರಣಬದ್ಧ ಭಾಷೆಯಲ್ಲಿ ಅರ್ಥಪೂರ್ಣವಾಗಿಸುವಂತೆ ಮಾಡಬೇಕು. ಯಾವುದಾದರೂ ಅಧ್ಯಾಯದ ಬಗ್ಗೆ ತೃಪ್ತಿ ಇರದಿದ್ದಲ್ಲಿ ಶ್ರಮವಹಿಸಿ ಅದನ್ನು ಮರು ರಚನೆ ಮಾಡುವ ಜವಾಬ್ದಾರಿಯೂ ಮುಖ್ಯಸಂಪಾದಕರದಾಗಿರುತ್ತದೆ.

12) ಯಾವುದೇ ಜಿಲ್ಲೆಯ ಐತಿಹಾಸಿಕ ಮಹತ್ವದ ವಿಷಯಗಳನ್ನು ಸ್ಥಳೀಯ ಇತಿಹಾಸವನ್ನು ಗ್ಯಾಸೆಟಿಯರ್ ಗಳಲ್ಲಿ ಬಿಂಬಿಸಲು ಮುಖ್ಯ ಸಂಪಾದಕರು ವಿಶೇಷ ಆಸ್ಥೆ ವಹಿಸಬೇಕು. ಅಖಿಲ ಕರ್ನಾಟಕ ಅಥವಾ ಅಖಿಲ ಭಾರತದ ಐತಿಹಾಸಿಕ ಮಹತ್ವದ ಪ್ರಕರಣಗಳು ಆಯಾಯ ಸ್ಥಳಗಳಲ್ಲಿ ಘಟಿಸಿದ್ದರೆ, ಅವುಗಳ ಮೂಲಾಧಾರಗಳನ್ನು ಅಧ್ಯಯನ ಮಾಡಿ, ಅವುಗಳಿಗೆ ಪ್ರಾಮುಖ್ಯತೆ ನೀಡಿ, ದಾಖಲಿಸಬೇಕು. ರಾಜಕೀಯ ಇತಿಹಾಸವೇ ಅಲ್ಲದೇ ಜನರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಬದುಕಿನ ಸ್ಪಷ್ಟ ಚಿತ್ರಣ ಗ್ಯಾಸೆಟಿಯರ್ ಗಳಲ್ಲಿ ಬಿಂಬಿತವಾಗಬೇಕು.

13) ಹಲವು ಸೂಕ್ಷ್ಮ ವಿಷಯಗಳನ್ನು ಪ್ರತಿಪಾದಿಸುವಲ್ಲಿ ಮುಖ್ಯ ಸಂಪಾದಕರು ವಿಶೇಷ ಗಮನ ಹರಿಸಬೇಕು. ಜನರ ಜಾತಿ, ಕುಲ, ಗೋತ್ರ, ಸಂಪ್ರದಾಯ, ಭಾಷೆ ಅವರ ಧಾರ್ಮಿಕ ಬದುಕಿನ ಬಗ್ಗೆಯ ಬರವಣಿಗೆಗಳನ್ನು ಯಾರ ಭಾವನೆಗಳಿಗೂ ಘಾಸಿಯಾಗದಂತೆ, ಚರ್ಚೆಗೆ ಒಳಪಡದಿರುವಂತೆ, ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸದಂತೆ, ಕಾನೂನು ರೀತ್ಯ ತೊಡಕಾಗದಂತೆ ಪ್ರತಿಪಾದಿಸಬೇಕು. ಸರಕಾರಿ ಗೆಜೆಟಿಯರುಗಳು ಯಾವುದೇ ನ್ಯಾಯಸ್ಥಾನದಲ್ಲಿ ಸಾಕ್ಷಿ ಪುರಾವೆಗಳಾಗಿ ನಿಲ್ಲಬಲ್ಲ ಪ್ರಕಟಣೆಗಳಾದ್ದರಿಂದ ಮೇಲಿನ ಅಂಶಗಳು ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತವೆ.

14) ಸಂಪಾದನೆಗೊಂಡ ಕರಡು ಅಧ್ಯಾಯಗಳನ್ನು ಕಂತುಗಳಲ್ಲಿ ಸಲಹಾ ಸಮಿತಿ ಸದಸ್ಯರಿಗೆ ರವಾನೆ ಮಾಡಿ, ಅವರ ಸಲಹೆ ಸೂಚನೆಗಳನ್ನು ಪಡೆಯಲು ಸಲಹಾ ಸಮಿತಿ ಸಭೆಯನ್ನು ಕರೆದು, ಅದರಲ್ಲಿ ನಡೆಯುವ ಚರ್ಚೆಗಳಲ್ಲಿ ಮುಖ್ಯ ಸಂಪಾದಕರು ಪಾಲ್ಗೊಂಡು, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ ಅವನ ಅನುಮಾನಗಳನ್ನು ಪರಿಹರಿಸಬೇಕು. ಸದಸ್ಯರ ಸಲಹೆಗಳನ್ನು ಅಮೂಲಾಗ್ರವಾಗಿ ಅಧ್ಯಾಯಗಳಲ್ಲಿ ಅಳವಡಿಸಿದ ನಂತರ ಅವುಗಳನ್ನು ಪುನ: ಪರಿಶೀಲಿಸಿ, ಮುದ್ರಣಕ್ಕೆ ಕಳುಹಿಸಬೇಕು.

15) ಸಂಬಂಧಪಟ್ಟ ಇಲಾಖೆಯಿಂದ ಜಿಲ್ಲೆಯ ಭೂಪಟವನ್ನು, ವಿವಿಧ ಇಲಾಖೆ ಹಾಗೂ ಸಂಸ್ಥೆಗಳಿಂದ ಅವಶ್ಯ ಛಾಯಾಚಿತ್ರಗಳನ್ನು ಪಡೆಯಬೇಕು.

16) ಮುದ್ರಣಾಲಯದಲ್ಲಿ ಜವಾಬ್ದಾರಿಯುತವಾಗಿ ಕರಡು ತಿದ್ದುವ ಕಾರ್ಯದ ಮೇಲ್ವಿಚಾರಣೆ ಮಾಡಿ, ಸಕಾಲಕ್ಕೆ ಮುದ್ರಣ ಕಾರ್ಯ ಮುಗಿಸಿ, ಆಯಾಯ ಜಿಲ್ಲಾ ಕೇಂದ್ರಗಳಲ್ಲಿ ಪತ್ರಕರ್ತರ ಸಮ್ಮುಖದಲ್ಲಿ ಗ್ರಂಥವನ್ನು ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಬೇಕು.

17) ನಿಗದಿಪಡಿಸಿದ ಗ್ಯಾಸೆಟಿಯರ್ ಮಾರಾಟ ಕೇಂದ್ರಗಳಲ್ಲಿ ಗ್ರಂಥಗಳಲ್ಲಿ ಮಾರಾಟದ ಪ್ರಗತಿಯ ಬಗ್ಗೆ ನಿಗಾ ವಹಿಸಬೇಕು.

18) ವಿವಿಧ ಇಲಾಖೆಗಳಿಂದ ಎರವಲು ಸೇವೆಯಲ್ಲಿ ಬಂದ ಹಾಗೂ ಇಲಾಖೆಯ ಬಂದ ಹಾಗೂ ಇಲಾಖೆಯ ವಿವಿಧ ಸಿಬ್ಬಂದಿಯೊಡನೆ ಅಧಿಕಾರಿಗಳೊಡನೆ ಸೌಹಾರ್ದತೆ ಕಾಪಾಡಿಕೊಂಡು ಶಿಸ್ತು, ಸಮಯಪಾಲನೆ, ಕರ್ತವ್ಯ ನಿರ್ವಹಣೆಯಲ್ಲಿ ಮುಖ್ಯ ಸಂಪಾದಕರು ಇತರರಿಗೆ ಮಾದರಿಯಾಬೇಕು.

19) ಇಲಾಖೆಯ ಪ್ರಗತಿಯ ಬಗ್ಗೆ ಮುಖ್ಯ ಸಂಪಾದಕರು ಸಂಪೂರ್ಣ ಹೊಣೆಗಾರರಾಗಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಇಲಾಖೆಯ ಕಾರ್ಯದರ್ಶಿಯವರಿಗೆ ಉತ್ತರ ನೀಡಬೇಕಾಗುತ್ತದೆ. ಇವರಿಗೆ ಕಾಲಕಾಲಕ್ಕೆ ಪ್ರಗತಿ ವರದಿ ರವಾನಿಸಬೇಕು.

20) ಇಲಾಖೆಯ ಹಣ ಆಯಾಯ ಆರ್ಥಿಕ ವರ್ಷದಲ್ಲಿ ಸದುಪಯೋಗಗೊಳ್ಳುವ ಬಗ್ಗೆ ಮುಖ್ಯ ಸಂಪಾದಕರು ಕಾಳಜಿವಹಿಸಿ, ಇಲಾಖೆಯ ಪ್ರಕಟಣಾ ಕಾರ್ಯದ ಸದುದ್ದೇಶ ಈಡೇರುವಂತೆ ಕಾರ್ಯನಿರ್ವಹಿಸಬೇಕು.

II ಹಿರಿಯ ಸಂಪಾದಕರು

1) ಗ್ಯಾಸೆಟಿಯರ್ ಪ್ರಕಟಣೆಗೆ ಸಂಬಂಧಿಸಿದ ಮಾಹಿತಿಯನ್ನು ವಿವಿಧ ಸರಕಾರಿ, ಅರೆಸರಕಾರಿ ಕಛೇರಿಗಳು, ಸಂಘ ಸಂಸ್ಥೆಗಳು ಹಾಗೂ ತಜ್ಞರಿಗೆ ಪತ್ರಗಳನ್ನು ಪ್ರಶ್ನೆಮಾಲಿಕೆಗಳನ್ನೂ ಬರೆದು ಸಂಗ್ರಹಿಸಬೇಕು.

2) ಅನ್ವೇಷಕರಿಗೆ ಮಾರ್ಗದರ್ಶನ ನೀಡಿ, ಅವರ ಕಾರ್ಯಪ್ರಗತಿ ಪರಿಶೀಲಿಸಬೇಕು.

3) ಎರಡು ವಾರಗಳ ಕಾಲ ಜಿಲ್ಲಾ ಪ್ರವಾಸ ಕೈಗೊಂಡು ಸಂಸ್ಥೆಗಳಿಗೆ ಭೇಟಿ ನೀಡಿ ಹಾಗೂ ಜಿಲ್ಲಾ ತಜ್ಞರನ್ನು ಭೇಟಿ ಮಾಡಿ ಜಿಲ್ಲೆಯ ಸಂಪೂರ್ಣ ಪರಿಚಯ ಮಾಡಿಕೊಳ್ಳಬೇಕು.

4) ರಾಜ್ಯದ ವಿವಿಧೆಡೆ ಹಾಗೂ ಪ್ರಮುಖವೆನಿಸಿದೆಲ್ಲಿ ಇತರೆಡೆಗಳಲ್ಲಿ ನಡೆಯುವ ಸಮಾವೇಶ, ಕಮ್ಮಟ, ಗೋಷ್ಠಿ ಹಾಗೂ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಬೇಕು.

5) ವಿವಿಧೆಡೆಗಳಿಂದ ಪುಸ್ತಿಕೆ, ಕೈಪಿಡಿ, ಮಾಸಿಕ ಅಥವಾ ಇತರೆ ಹೊತ್ತಿಗೆಗಳನ್ನು ಪಡೆಯಬೇಕು.

6) ವಿವಿಧೆಡೆಗಳಿಂದ ಬಂದ ಉತ್ತರಗಳನ್ನು ಮಾಹಿತಿಯನ್ನು ಪರಿಶೀಲಿಸಿ, ಅವಶ್ಯವಿದ್ದೆಡೆ ನೆನಪೋಲೆ ಬರೆಯಿಸಿ, ಸಂದರ್ಭ ಬಿದ್ದರೆ ಅನ್ವೇಷಕರನ್ನು ಖುದ್ದಾಗಿ ಕಳುಹಿಸಿ, ಬಂದ ಮಾಹಿತಿಯ ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳಬೇಕು.

7) ಹೀಗೆ ಕ್ರೋಢಿಕರಿಸಲ್ಪಟ್ಟ ಮಾಹಿತಿಯನ್ನು ಅರ್ಥಪೂರ್ಣ ಅಧ್ಯಾಯಗಳಾಗಿ ಮಾರ್ಪಡಿಸಬೇಕು.

8) ಮುಖ್ಯ ಸಂಪಾದಕರು ಈ ಅಧ್ಯಾಯಗಳ ಪರಿಶೀಲನೆ ನಡೆಸಿದ ನಂತರ ಅವುಗಳನ್ನು ಪುನರ್ಪರಿಶೀಲಿಸಿ, ಸೂಕ್ತ ಮಾರ್ಪಾಡುಗಳ ಅವಶ್ಯಕತೆ ಇದ್ದಲ್ಲಿ ಅವನ್ನು ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಅಳವಡಿಸಬೇಕು.

9) ಸಲಹಾ ಸಮಿತಿ ಸಭೆಯ ಸಲಹೆಗಳನ್ನು ಸೂಕ್ತ ರೀತಿಯಲ್ಲಿ ಸೇರ್ಪಡೆ ಮಾಡಬೇಕು.

10) ಕರಡು ತಿದ್ದುವ ಕಾರ್ಯದಲ್ಲಿ ಎಚ್ಚರಿಕೆ ಹಾಗೂ ನಿಗಾ ವಹಿಸಿ, ಅನ್ವೇಷಕರ ಹಾಗೂ ಕರಡು ತಿದ್ದುವವರ ಪ್ರಗತಿ ಗಮನಿಸಬೇಕು.

11) ಮುಖ್ಯ ಸಂಪಾದಕರ ಎಲ್ಲಾ ದೈನಂದಿನ ಅಧಿಕೃತ ಕೆಲಸ ಕಾರ್ಯಗಳಲ್ಲಿ ನೇರವಾಗಿ ಅವರು ಕಾಲಕಾಲಕ್ಕೆ ವಹಿಸುವ ಜವಾಬ್ದಾರಿಗಳನ್ನು ನಿರ್ವಹಿಸಬೇಕು.

III ಸಂಪಾದಕರು

1) ಇಲಾಖೆಯ ಸಂಪಾದಕರು ಮುಖ್ಯ ಸಂಪಾದಕರ ಹಾಗೂ ಹಿರಿಯ ಸಂಪಾದಕರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಬೇಕು.

2) ವಿವಿಧ ಆಕರಗಳಿಂದ ಮಾಹಿತಿ ಸಂಗ್ರಹಣೆ ಮಾಡಬೇಕು.

3) ವಿವಿಧೆಡೆಗಳಿಗೆ ಪತ್ರ ವ್ಯವಹಾರ ಮಾಡಿ, ಸಕಾಲಕ್ಕೆ ಮಾಹಿತಿ ಬಾರದಿದ್ದಲ್ಲಿ ನೆನಪೋಲೆಗಳನ್ನು ಬರೆಯಬೇಕು.

4) ಅನ್ವೇಷಕರ ಕಾರ್ಯ ಪ್ರಗತಿ ಗಮನಿಸಿ, ಅವರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು.

5) ಎರಡು ವಾರಗಳ ಕಾಲ ಜಿಲ್ಲಾ ಪ್ರವಾಸ ಕೈಗೊಂಡು, ವಿವಿಧ ಕಛೇರಿ, ಸಂಘ ಸಂಸ್ಥೆಗಳನ್ನು ಭೇಟಿ ಮಾಡಿ, ತಜ್ಞರೊಡನೆ ಚರ್ಚಿಸಿ ಮಾಹಿತಿ ಸಂಗ್ರಹ ಮಾಡಬೇಕು.

6) ಕಮ್ಮಟ, ಗೋಷ್ಠಿ, ಸಮಾವೇಶ ಹಾಗೂ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಬೇಕು.

7) ವರದಿ, ಕೈಪಿಡಿ, ಪುಸ್ತಿಕೆಗಳನ್ನು ಕಲೆ ಹಾಕಿ ಅವುಗಳಲ್ಲಿನ ಮಾಹಿತಿಯನ್ನು ಅವಶ್ಯವಿದ್ದಡೆ ಗ್ಯಾಸೆಟಿಯರುಗಳಲ್ಲಿ ಬಳಸಿಕೊಳ್ಳಬೇಕು.

8)ನಿಗದಿತ ಸಮಯಕ್ಕೆ ನಿಗದಿತ ರೀತಿಯಲ್ಲಿ ಅಧ್ಯಾಯಗಳನ್ನು ರಚಿಸಬೇಕು.

9) ಸಲಹಾ ಸಮಿತಿ ಸಭೆಗೆ ರವಾನಿಸಲು ಸಕಾಲಕ್ಕೆ ಅಧ್ಯಾಯಗಳನ್ನು ರಚಿಸಿ, ಮುಖ್ಯ ಸಂಪಾದಕರಿಗೆ ನೀಡಿ, ಸಲಹಾ ಸಮಿತಿ ಸಭೆಯ ಸದಸ್ಯರ ಸಲಹೆ ಸೂಚನೆಗಳನ್ನು ತಮ್ಮ ಅಧ್ಯಾಯಗಳಲ್ಲಿ ಅಳವಡಿಸಬೇಕು.

10) ಅಧ್ಯಾಯಗಳು ಮುದ್ರಣಗೊಳ್ಳುವಾಗ ಕರಡು ತಿದ್ದುವ ಕಾರ್ಯವನ್ನು ಕೂಲಂಕಷವಾಗಿ ಪರಿಶೀಲಿಸಿ, ಅನ್ವೇಷಕ/ಕರಡು ತಿದ್ದುವವರಿಗೆ ನೆರವಾಗಬೇಕು.

11) ತಂತಮ್ಮ ಅಧ್ಯಾಯಗಳ ಇಂಡೆಕ್ಸ್, ಅಡೆಂಡಾ, ಕೋರಿಜೆಂಡಾ, ತಿದ್ದುಪಡಿ, ವಿಷಯಾನುಕ್ರಮಣೆ ಭೂಪಟ ಹಾಗೂ ಛಾಯಾಚಿತ್ರಗಳು ಸೂಕ್ತವಾಗಿವೆಯೇ ಎಂದು ನಿಗಾವಹಿಸಬೇಕು.

12) ಮುಖ್ಯ ಸಂಪಾದಕರು ಕಾಲಕಾಲಕ್ಕೆ ವಹಿಸುವ ಜವಾಬ್ದಾರಿಗಳನ್ನು ನಿರ್ವಹಿಸಬೇಕು.

IV ಅನ್ವೇಷಕರು

ಇಲಾಖೆಯು ಅನ್ವೇಷಕರ ಕೆಲಸ ಸಾಮಾನ್ಯವಾಗಿ ಕಛೇರಿಯ ಹೊರಗೆ ತಿರುಗಾಡಿ ಮಾಹಿತಿ ಸಂಗ್ರಹಿಸುವ ಕಾರ್ಯವಾಗಿರುತ್ತದೆ. ಸಂಬಂಧಪಟ್ಟ ಜಿಲ್ಲೆ ಅಥವಾ ಬೆಂಗಳೂರು ನಗರದಲ್ಲಿ ಮಾಹಿತಿ ಸಂಗ್ರಹ ಕಾರ್ಯ ಇವರ ಪ್ರಮುಖ ಕರ್ತವ್ಯವಾಗಿರುತ್ತದೆ. ಇದಕ್ಕಾಗಿ ಇವರು ಮುಖ್ಯ/ಹಿರಿಯ ಹಾಗೂ ಇತರೆ ಸಂಪಾದಕರೊಂದಿಗೆ ಸಮಾಲೋಚನೆ ನಡೆಸಬೇಕು. ಮಾಹಿತಿ ಸಂಗ್ರಹಕ್ಕಾಗಿ ಅವು ಸಿಗಬಹುದಾದ ಎಲ್ಲಾ ಎಡೆಗಳಿಗೆ ಪ್ರವಾಸ ಮಾಡಿ, ವಿವಿಧ ಸ್ಥಳಗಳಿಗೆ ಭೇಟಿ ನೀಡಬೇಕು. ವಿಷಯ ತಜ್ಞ ಅಥವಾ ಖಾಸಗಿ ವ್ಯಕ್ತಿಗಳನ್ನು ಭೇಟಿ ಮಾಡಿ ಸಂಬಂಧಪಟ್ಟ ಮಾಹಿತಿಯನ್ನು ಸಂಗ್ರಹಿಸಬೇಕು. ಇಲಾಖೆಗೆ ಸಂಬಂಧಿಸಿದ ಯಾವುದೇ ಮಾಹಿತಿ, ಛಾಯಾಚಿತ್ರ, ಇತರೆ ವಿಷಯಗಳನ್ನು ಪ್ರವಾಸ ಕೈಗೊಂಡು ತರುವ ಗುರುತರ ಜವಾಬ್ದಾರಿಯನ್ನು ಇವರು ಹೊಂದಿರುತ್ತಾರೆ.

V ಲೈಬ್ರರಿ-ಕಂ-ಜನರಲ್-ಅಸಿಸ್ಟೆಂಟ್

ಲೈಬ್ರರಿ ಸಹಾಯಕರ ಕರ್ತವ್ಯ, ಜವಾಬ್ದಾರಿ ಕೆಳಕಂಡಂತಿದೆ.

 1. ಲೈಬ್ರರಿ ವಿಜ್ಞಾನಕ್ಕನುಗುಣವಾಗಿ ಎಲ್ಲಾ ಗ್ರಂಥಗಳು, ಸಾಪ್ತಾಹಿಕ, ಪಾಕ್ಷಿಕ, ಮಾಸಿಕ ಹೊತ್ತಿಗೆಗಳನ್ನು ಜೋಡಿಸಿ ಒಪ್ಪವಾಗಿಡುವುದು.
 2. ಕಾರ್ಡ್ ಮತ್ತು ಕೆಟಲಾಗ್ ಪದ್ಧತಿಯನ್ನು ಅನುಸರಿಸುವುದು
 3. ಪುಸ್ತಕಗಳು, ಸೊವೆನೀರ್ ಗಳು, ಪೀರಿಯಾಡಿಕಲ್ಸ್, ಜರ್ನಲ್ಸ್ ಮ್ಯಾಗಜೀನ್ಸ್ ಇವುಗಳ ವಿತರಣೆ ಹಾಗೂ ವಾಪಾಸ್ಸು ಪಡೆದ ಬಗ್ಗೆ ಲೆಕ್ಕ ತ:ಖ್ತೆ ಇಡುವುದು.
 4. ಎಲ್ಲಾ ಪುಸ್ತಕಗಳ ಅಚ್ಚುಕಟ್ಟು ನಿರ್ವಹಣೆ
 5. ಎಲ್ಲಾ ಪುಸ್ತಕ, ಜರ್ನಲ್ಸ್, ಬುಕ್ ಲೆಟ್, ಪೀರಿಯಾಡಿಕಲ್ಸ್, ಇವುಗಳ ಭದ್ರತೆ ಕಾರ್ಯನಿರ್ವಹಣೆ.
 6. ಈ ಎಲ್ಲಾ ಹೊತ್ತಿಗೆಗಳ ವಿಷಯಸೂಚಿ, ಎಕ್ಸ್ಟ್ರಾಕ್ಟ್, ಅಬ್ಸ್ ಟ್ರಾಕ್ಟ್ ಗಳ ಕೆಲಸ ನಿರ್ವಹಣೆ.
 7. ಅವಶ್ಯಕತೆಗೆ ತಕ್ಕಂತೆ, ದಿನಪತ್ರಿಕೆಗಳು, ಜರ್ನಲ್ಸ್ ಗಳ ಕ್ಲಿಪಿಂಗ್ಸ್ ತೆಗೆದು ಅವುಗಳ ಸಮರ್ಪಕ ನಿರ್ವಹಣೆ.
 8. ಗ್ಯಾಸೆಟಿಯರ್ ಗಳ ಮಾರಾಟ, ಇದಕ್ಕೆ ಸಂಬಂಧಪಟ್ಟ ಕಡತ ನಿರ್ವಹಣೆ, ಗೌರವಪ್ರತಿಗಳ ಬಗ್ಗೆ ಕಡತ ನಿರ್ವಹಣೆ ಹಾಗೂ ರೆಸಿಪ್ರೊಕಲ್ ಆಧಾರದ ಮೇಲೆ ಗ್ಯಾಸೆಟಿಯರ್ ಗಳ ರವಾನೆ ನಿರ್ವಹಣೆ ಮಾಡುವುದು.
 9. ಸಂಪಾದಕರು ಹಾಗೂ ಅಧೀಕ್ಷಕರು ವಹಿಸುವ ಇತರೆ ಗ್ರಂಥಾಲಯದ ಕೆಲಸ ನಿರ್ವಹಣೆ.

 

VI ಅಧೀಕ್ಷಕರ ಕರ್ತವ್ಯ, ಜವಾಬ್ದಾರಿಗಳು ಕೆಳಕಂಡಂತಿವೆ.

ಗ್ಯಾಸೆಟಿಯರ್ ಇಲಾಖೆಯಲ್ಲಿ ಲೆಕ್ಕಪತ್ರ ಸಹಾಯಕರು, ಕ್ಯಾಷಿಯರ್ ಎಂದು ಪ್ರತ್ಯೇಕ ಹುದ್ದೆಗಳಿಲ್ಲದ ಕಾರಣ, ಈ ಕೆಳಕಂಡ ಎಲ್ಲಾ ಕಛೇರಿ ಕೆಲಸ ಕಾರ್ಯಗಳನ್ನು ಅಧೀಕ್ಷಕರ ಮೇಲುಸ್ತುವಾರಿಯಲ್ಲಿ ನಿರ್ವಹಣೆ ಮಾಡಬೇಕಾಗುವುದು.

1) ಕ್ಯಾಷ್ ಪುಸ್ತಕ, ನಗದು, ವೋಚರ್ ಗಳು, ಸಾದಿಲ್ವಾರು ವೆಚ್ಚದ ರಿಜಿಸ್ಟರ್ ಗಳು.

2) ವೇತನ ಬಿಲ್ ಗಳು, ಪ್ರವಾಸ ಭತ್ಯೆ ಬಿಲ್ ಗಳು, ಸಾದಿಲ್ವಾರು ಬಿಲ್ ಗಳು, ಬಾಡಿಗೆ ದರ ಬಿಲ್ ಗಳು ಹಾಗೂ ಮುದ್ರಣ ಬಿಲ್ ಗಳು

3) ಫರ್ನಿಚರ್, ಡೆಡ್ ಸ್ಟಾಕ್ ರಿಜಿಸ್ಟರ್ ಗಳು.

4) ಮಹಾಲೇಖಪಾಲರ ಕಛೇರಿಯೊಂದಿಗೆ ಕಚೇರಿಯ ಲೆಕ್ಕ ಹೊಂದಾಣಿಕೆ

5) ಬಡ್ಜೆಟ್, ರಿಅಪ್ರೋಪ್ರಿಯೇಷನ್, ಅಧ್ಯರ್ಪಣೆ ಹಾಗೂ ಆಡಿಟ್ ರಿಪೋಟಗಳು

6) ಸೇವಾ ಪುಸ್ತಕಗಳು, ಸ್ಟಾಂಪ್ ಲೆಕ್ಕಗಳು

7) ಸರ್ಕಾರಕ್ಕೆ ಕಳುಹಿಸಲಾಗುವ ತ್ರೈಮಾಸಿಕ, ವಾರ್ಷಿಕ ವರದಿಗಳು ಇತ್ಯಾದಿ:

8) ಗೌಪ್ಯ ವರದಿಗಳು, ಆಸ್ತಿ, ಋಣ ಪಟ್ಟಿ ಇತ್ಯಾದಿ

ಅಧೀಕ್ಷಕರು, ಮೂರು ಜನ ಸಹಾಯಕರು, ಒಬ್ಬ ಶೀಘ್ರಲಿಪಿಗಾರರು, ಮೂರು ಬೆರಳಚ್ಚುಗಾರರು ಹಾಗೂ ನಾಲ್ಕು ಮಂದಿ ‘ಡಿ’ ವರ್ಗದ ನೌಕರರ ಕೆಲಸ ಕಾರ್ಯಗಳನ್ನು ಮೇಲುಸ್ತುವಾರಿ ಮಾಡಬೇಕಾಗಿರುತ್ತದೆ. ಸಹಾಯಕರುಗಳಿಗೆ ಕೆಲಸ ಕಾರ್ಯದ ಬಗ್ಗೆ ಮಾರ್ಗದರ್ಶನ ಮಾಡುವುದಲ್ಲದೆ, ಆಡಳಿತ ಲೆಕ್ಕಪತ್ರಗಳಿಗೆ ಸಂಬಂಧಿಸಿದಂತೆ, ಕಾರ್ಯ ನಿರ್ವಹಣೆ ಮಾಡಬೇಕಾಗುತ್ತದೆ.

VII  ಸಹಾಯಕರ ಕರ್ತವ್ಯ ಜವಾಬ್ದಾರಿಗಳು

1) ಪ್ರವಾಸ ಭತ್ಯೆ, ಸಾದಿಲ್ವಾರು, ಬಿಲ್ಲುಗಳ ತಯಾರಿಕೆ, ವೇತನ ಬಿಲ್ಲುಗಳು ಸಿಬ್ಬಂದಿ ಶಾಖೆಯ ನಿರ್ವಹಣೆ, ನಗದುಪುಸ್ತಕ ಬರೆಯುವುದು, ಸಾದಿಲ್ವಾರು ರಿಜಿಸ್ಟರ್ ಗಳೂ ಇವರನ್ನು ಅಧೀಕ್ಷಕರ ಮೇಲ್ವಿಚಾರಣೆಯಲ್ಲಿ ನಿರ್ವಹಣೆ ಮಾಡುವುದು.

2) ಸ್ಟೇಷನರಿ ಫಾರಂಗಳ ನಿರ್ವಹಣೆ, ಸ್ವೀಕೃತಿ ಹಾಗೂ ವಿತರಣೆ ರಿಜಿಸ್ಟರ್ ಗಳ ನಿರ್ವಹಣೆ, ಸ್ಟಾಕ್ ನಿರ್ವಹಣೆ, ವಾರ್ಷಿಕ ಸ್ಟೇಷನರಿಗಾಗಿ ಬೇಡಿಕೆ ಸಲ್ಲಿಸುವುದು.

3) ಫರ್ನಿಚರ್ ಹಾಗೂ ಇತರೆ ಸ್ಟಾಕ್ ರಿಜಿಸ್ಟರ್ ಗಳ ನಿರ್ವಹಣೆ.

4) ಗೌರವ ಪ್ರತಿಗಳ ಬಗ್ಗೆ ಪತ್ರ ವ್ಯವಹಾರ, ರಿಜಿಸ್ಟರ್ ನಿರ್ವಹಣೆ, ಎಕ್ಸೇಂಜ್ ಪ್ರತಿಗಳ ಬಗ್ಗೆ ಕೆಲಸ ನಿರ್ವಹಣೆ, ಮಾರಾಟ ಇತ್ಯಾದಿ ಕೆಲಸಗಳ ನಿರ್ವಹಣೆ.

5) ಟೈಪ್ ಆದ ಅಧ್ಯಾಯಗಳ ಬಗ್ಗೆ ತಾಳೆ ನೋಡುವ ಕೆಲಸದಲ್ಲಿ ಸಹಕಾರ ನೀಡುವುದು ಹಾಗೂ ಅಧಿಕಾರಿಗಳು ಆಗಿಂದಾಗ್ಗೆ ವಹಿಸುವ ಕಛೇರಿ ಕೆಲಸಗಳ ನಿರ್ವಹಣೆ.

 

 

 

 

 

 

 

 

 

 

 

ಇತ್ತೀಚಿನ ನವೀಕರಣ​ : 22-09-2020 11:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಗ್ಯಾಸೆಟಿಯರ್ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080